ಏಷ್ಯನ್ ಕ್ರೀಡಾಕೂಟ', ಹಾಗೂ ಏಷ್ಯಾಡ್, ಎಂದೂ ಕರೆಯಲಾಗುವ ಬಹು-ಕ್ರೀಡೆಗಳ ಕ್ರೀಡಾಕೂಟವು ನಾಲ್ಕು ವರ್ಷಕ್ಕೊಮ್ಮೆ ಏಷ್ಯಾದ ಎಲ್ಲಾ ದೇಶಗಳ ಕ್ರೀಡಾಪಟುಗಳ ನಡುವೆ ಆಡಲಾಗುತ್ತದೆ. ಏಷ್ಯನ್ ಕ್ರೀಡಾಕೂಟವು ಭಾರತದ ನವದೆಹಲಿಯ ಮೊದಲ ಕ್ರೀಡಕೂಟದಿಂದ ೧೯೭೮ರ ಕ್ರೀಡಕೂಟದ ತನಕ ಏಷ್ಯನ್ ಗೇಮ್ಸ್ ಫೆಡೆರೆಷನ್‌ನಿಂದ ನಿಯಂತ್ರಸಲ್ಪಟ್ಟಿತ್ತು. ೧೯೮೨ರ ಕ್ರೀಡಕೂಟದಿಂದ ಒಲಂಪಿಕ್ ಕೌನ್ಸಿಲ್ ಆಫ್ ಏಷ್ಯಾ ದಿಂದ ಆಯೋಜಿಸಲ್ಪಡಲಾಗುತ್ತಿದೆ. ಈ ಕ್ರೀಡಾಕೂಟವು ಅಂತರಾಷ್ಟ್ರೀಯ ಒಲಂಪಿಕ್ ಕಮಿಟಿಯಿಂದ ಮಾನ್ಯತೆ ಪಡೆದಿದ್ದು, ಒಲಂಪಿಕ್ ಕ್ರೀಡಾಖೂಟದ ನಂತರ, ಅತಿ ದೊಡ್ಡ ಬಹು-ಕ್ರೀಡೆಗಳ ಕ್ರೀಡಾಕೂಟವಾಗಿದೆ. ಇದುವರೆಗೂ ಒಂಬತ್ತು ದೇಶಗಳು ಆತಿಥ್ಯವನ್ನು ವಹಿಸಿಕೊಂಡಿವೆ. ಇಸ್ರೇಲ್ಅನ್ನು ಹೊರತು ಪಡಿಸಿ, ಈವರೆಗೂ ನಲವತ್ತಾರು ರಾಷ್ಟ್ರಗಳು ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಿವೆ. ಕಳೆದ ಕ್ರೀಡಕೂಟವು ಸೌತ್ ಕೊರಿಯಾದ ಇಂಚಿಯಾನ್ ನಗರದಲ್ಲಿ ಸೆಪ್ಟಂಬರ್ ೧೯ರಿಂದ ಅಕ್ಟೋಬರ್ ೪ ೨೦೧೪ ರವರೆಗೆ ನಡೆದಿತ್ತು. == ಇತಿಹಾಸ == === ರಚನೆ === ೧೩ ಫೆಬ್ರವರಿ ೧೯೪೯ ರಲ್ಲಿ ಏಷ್ಯನ್ ಅಥ್ಲೆಟಿಕ್ ಫೆಡರೇಷನ್ ಅಧಿಕೃತವಾಗಿ ನವದಹೆಲಿಯಲ್ಲಿ ಉದ್ಘಾಟಿಸಲಾಯಿತು, ಜೊತೆಯಲ್ಲಿ ದೆಹಲಿಯನ್ನು ಮೊದಲ ಆತಿಥ್ಯ ನಗರವಾಗಿ ೧೯೫೦ ರಲ್ಲಿ ನೆಡಸಬೇಕೆಂದು ಘೋಷಿಸಲಾಯಿತು. == ಚಿಹ್ನೆಗಳು == ಒಲಂಪಿಕ್ ಕ್ರೀಡಾಕೂಟದಂತೆಯೇ, ಒಲಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಕೂಡ ಅವರ ಆದರ್ಶಗಳನ್ನು ಚಿಹ್ನೆಗಳ ಮೂಲಕ ಪ್ರತಿನಿಧಿಸುತ್ತವೆ: ಒಲಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಏಷ್ಯಾನ್ ಕ್ರೀಡಾಕೂಟದ ಜ್ಯೋತಿ ಒಲಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಗೀತೆ == ಹಿಂದಿನ 16 ಕ್ರೀಡಾಕೂಟಗಳ ವಿವರ == ಇಂಡೋನೇಷ್ಯಾದ ರಾಜಧಾನಿಯಾದ ಜಕಾರ್ತಾ ಮತ್ತು ದಕ್ಷಿಣ ಸುಮಾತ್ರ ಪ್ರಾಂತ್ಯದ ರಾಜಧಾನಿ ಪಾಲೆಂಬಾಂಗ್. (ದಕ್ಷಿಣ ಸುಮಾತ್ರ ಪ್ರಾಂತ್ಯದ ರಾಜಧಾನಿ ಪಾಲೆಂಬಾಂಗ್.ಬ್ಯಾಂಡಂಗ್ ಮತ್ತು ಪಶ್ಚಿಮ ಜಾವಾ ಮತ್ತು ಬಾಂಟೆನ್ ಪ್ರಾಂತ್ಯಗಳಲ್ಲಿನ ಸ್ಥಳಗಳು.} == ಭಾಗವಹಿಸುವಿಕೆ == ಒಲಂಪಿಕ್ ಕೌನ್ಸಿಲ್ ಆಫ್ ಏಷ್ಯಾ(ಒಸಿಎ)ದಲ್ಲಿ ಮಾನ್ಯತೆ ಪಡೆದ ೪೫ ಸದಸ್ಯ ರಾಷ್ಟ್ರಗಳು ಭಾಗವಹಿಸಲು ಅರ್ಹರಾಗಿರುತ್ತಾರೆ. ಏಳು ದೇಶಗಳಾದ ಭಾರತ, ಇಂಡೋನೇಷ್ಯಾ, ಜಪಾನ್, ಫಿಲಿಪ್ಪೀನ್ಸ್, ಶ್ರೀಲಂಕಾ, ಸಿಂಗಾಪುರ ಮತ್ತು ಥೈಲ್ಯಾಂಡ್ ಕ್ರೀಡಾಕೂಟದ ಎಲ್ಲಾ ಆವೃತ್ತಿಗಳಲ್ಲೂ ಸ್ಪರ್ದಿಸಿದ್ದವು. == ಭಾಗವಹಿಸುವ ದೇಶಗಳು == ಆವರಣದಲ್ಲಿ ೨೦೧೮ ರ ಏಷ್ಯಾಡ್‍ನಲ್ಲಿ ಆಯಾ ದೇಶಗಳ ಭಾಗವಹಿಸುವ ಕ್ರೀಡಾಪಟುಗಳ ಸಂಖ್ಯೆ: ಏಷ್ಯಾನ್ ಗೇಮ್ಸ್ ಇತಿಹಾಸದಲ್ಲಿ, ೨೦೧೪ರ ಇಂಚೆಯಾನ್ ಕ್ರೀಡಾಕೂಟವನ್ನು ಸೇರಿದಂತೆ, ೪೪ ಕ್ರೀಡೆಗಳನ್ನು ಪ್ರದರ್ಶಿಸಲಾಗಿದೆ. == ನೋಡಿ == ೨೦೧೮ ಏಷ್ಯನ್‌ ಕ್ರೀಡಾಕೂಟ == ಉಲ್ಲೇಖ == ರೂಪ